Wednesday, March 23, 2016

Ninnalade Naa Yara Numbali


ನಿನ್ನನಲ್ಲದೆ ನಾನು ಯಾರ ನಂಬಲ್ಲಿ
ನಿನ್ನನಲ್ಲದೆ ನಾನು ಯಾರ ಕೇಳಲ್ಲಿ
ನಿನ್ನನಲ್ಲದೆ ನಾನು ಯಾರ ಪ್ರೀತಿಸಲ್ಲಿ
ಪ್ರೀತಿ ಸ್ವರೋಪನೆ ಕರುಣ ಸಾಗರನೆ ಆಶ್ರಯದಾತನೆ ನಿನಗೆ ವಂದನೆ

ನಾನು ವೆದನೆ ಆಳುವ ಸಮಯದಿ ತಾಯಿಯಂತೆ ಬಂದೆ
ನಾನು ಕಷ್ಟಗಳಿಂದ ಕೊಗುವ ಸಮಯದಿ ತಂದೆಯಂತೆ ನಿಂತೆ
ನಿನ್ನ ಸ್ನೇಹ ಸ್ಪರ್ಶದಿ ಕಹಿಯ ಮರೆತು ನಿನ್ನನ್ನು ಸ್ತುತಿಸುವೆನು
ನಿನ್ನ ಸ್ನೇಹವ ಕಂಡು  ಶಿರವನು ಬಾಗಿ ನಿನ್ನನ್ನು ನಮಿಸುವೆನು
ಪ್ರೀತಿ ಸ್ವರೋಪನೆ ಕರುಣ ಸಾಗರನೆ ಆಶ್ರಯದಾತನೆ ನಿನಗೆ ವಂದನೆ

ನಿನ್ನ ಶಾಶ್ವತ ಪ್ರೇಮದ ಹಗ್ಗದಿಂದಲೆ ನನ್ನ ಸೆಳೆದುಕೊಂಡೆ
ನಿನ್ನ ಅಮರ ಮಮತೆಯ ಪಾಶದಿಂದಲೆ ನನ್ನ ಅಪ್ಪಿಕೊಂಡೆ
ನಿನ್ನ ಸ್ನೇಹ ದಾರೆಯ ನಲಿವಲ್ಲಿ ಮುಳುಗಿ ನಿನ್ನನ್ನು ಸ್ತುತಿಸುವೆನು
ನಿನ್ನ ಸ್ನೇಹದ ಹೊನಲಲ್ಲಿ ಆಶ್ರಸಿ ನಲ್ಲಿದು ನಿನ್ನನ್ನು ಹರಸುವೆನು
ಪ್ರೀತಿ ಸ್ವರೋಪನೆ ಕರುಣ ಸಾಗರನೆ ಆಶ್ರಯದಾತನೆ ನಿನಗೆ ವಂದನೆ


ನಿನ್ನನಲ್ಲದೆ ನಾನು ಯಾರ ನಂಬಲ್ಲಿ
ನಿನ್ನನಲ್ಲದೆ ನಾನು ಯಾರ ಕೇಳಲ್ಲಿ
ನಿನ್ನನಲ್ಲದೆ ನಾನು ಯಾರ ಪ್ರೀತಿಸಲ್ಲಿ
ಪ್ರೀತಿ ಸ್ವರೋಪನೆ ಕರುಣ ಸಾಗರನೆ ಆಶ್ರಯದಾತನೆ ನಿನಗೆ ವಂದನೆ 


Ninnalade naa yara numbali
Ninnalade naa yara kellali
Ninnalade naa yara prithisalli
Preethi swaroopane karuna sagarane arshyadathane 
Ninnage vandane

Naanu vedaneendha aaluva samayadhi thaiyanthe bundhe
Naanu kastagalindha kooguva samayadhi thandeyanthe ninthe
Ninna sehava kandu sheravanu bhagee ninnanu namisuvenu
Preethi swaroopane karuna sagarane arshyadthane ninnage vandane

Ninna shashwatha preemada hagadindale nanna seledukonde
Ninna amara mamatheya pashadindale nanna appikonde
Ninna sheha daraya nalivali muligi ninna stuthisuvenu
Ninna shehada honalalli aashresi nallidu ninnanu harasuvenu
Preethi swaroopane karuna sagarane arshyadhathane ninnage vandane

Ninnalade naa yara numbali
Ninnalade naa yara kellali
Ninnalade naa yara prithisalli
Preethi swaroopane karuna sagarane arshyadathane 
Ninnage vandane





 




Wednesday, February 3, 2016

KANNADA BIBLE ILLUSTRATION - PARABLE OF THE UNFORGIVING SERVANT

 ತರುವಾಯ ಪೇತ್ರನು ಆತನ ಬಳಿಗೆ ಬಂದು--ಕರ್ತನೇ, ನನ್ನ ಸಹೋದರನು ನನಗೆ ವಿರೋಧ ವಾಗಿ ಪಾಪಮಾಡಿದರೆ ನಾನು ಎಷ್ಟು ಸಾರಿ ಅವನಿಗೆ ಕ್ಷಮಿಸಬೇಕು? ಏಳು ಸಾರಿಯೋ ಎಂದು ಕೇಳಿದನು.

 ಯೇಸು ಅವನಿಗೆ--ಏಳು ಸಾರಿಯಲ್ಲ, ಆದರೆ ಏಳೆಪ್ಪತ್ತು ಸಾರಿ ಎಂದು ನಾನು ನಿನಗೆ ಹೇಳುತ್ತೇನೆ;

ಒಬ್ಬ ಅರಸನು ಅವನು ಲೆಕ್ಕವನ್ನು ತಕ್ಕೊಳ್ಳಲು ಪ್ರಾರಂಭಿಸಿದಾಗ ಹತ್ತು ಸಾವಿರ ತಲಾಂತುಗಳನ್ನು ಸಾಲ ಕೊಡಬೇಕಾದವನನ್ನು ಅವನ ಬಳಿಗೆ ತಂದರು.  ಆದರೆ ಕೊಡುವದಕ್ಕೆ ಅವನಿಗೆ ಏನೂ ಇಲ್ಲದ್ದರಿಂದ ಅವನನ್ನೂ ಅವನ ಹೆಂಡತಿಯನ್ನೂ ಮಕ್ಕಳನ್ನೂ ಅವನಿಗಿದ್ದದ್ದೆಲ್ಲವನ್ನೂ ಮಾರಿ ಸಾಲ ತೀರಿಸಬೇಕೆಂದು ಅವನ ಯಜಮಾನನು ಅಪ್ಪಣೆ ಕೊಟ್ಟನು.


 ಆಗ ಆ ಸೇವಕನು ನೆಲಕ್ಕೆ ಬಿದ್ದು ಅವನನ್ನು ವಂದಿಸಿ--ಧಣಿಯೇ, ನನ್ನನ್ನು ತಾಳಿಕೋ; ನಾನು ಎಲ್ಲವನ್ನು ನಿನಗೆ ಸಲ್ಲಿಸುವೆನು ಎಂದು ಹೇಳಿದನು.

 ಆ ಸೇವಕನ ಧಣಿಯು ಅವನ ಮೇಲೆ ಕನಿಕರಪಟ್ಟು ಅವನನ್ನು ಬಿಡಿಸಿ ಅವನ ಸಾಲವನ್ನೆಲ್ಲಾ ಬಿಟ್ಟು ಬಿಟ್ಟನು.

ಆದರೆ ಅದೇ ಸೇವಕನು ಹೊರಗೆ ಹೋಗಿ ತನಗೆ ನೂರು ದೇನಾರುಗಳನ್ನು ಸಾಲ ಕೊಡಬೇಕಾಗಿದ್ದ

ಅವನನ್ನು ಹಿಡಿದು ಕುತ್ತಿಗೆ ಹಿಸುಕಿ--ನನ್ನ ಸಾಲವನ್ನು ತೀರಿಸು ಅಂದನು,  ಅವನ ಪಾದಕ್ಕೆ ಬಿದ್ದು ಅವನಿಗೆ--ನನ್ನನ್ನು ತಾಳಿಕೋ; ನಾನು ನಿನ್ನದನ್ನೆಲ್ಲಾ ತೀರಿಸುತ್ತೇನೆ ಎಂದು ಅವನನ್ನು ಬೇಡಿಕೊಂಡನು.

 ಅವನು ಅದಕ್ಕೆ ಒಪ್ಪದೆ ಹೊರಟುಹೋಗಿ ತನ್ನ ಸಾಲವನ್ನು ತೀರಿಸುವ ವರೆಗೆ ಅವನನ್ನು ಸೆರೆಮನೆಯಲ್ಲಿ ಹಾಕಿಸಿದನು.

 ಹೀಗೆ ಅವನ ಜೊತೆ ಸೇವಕರು ನಡೆದದ್ದನ್ನು ನೋಡಿ ಬಹಳ ವ್ಯಥೆಪಟ್ಟು ಹೋಗಿ ತಮ್ಮ ಧಣಿಗೆ ನಡೆದದ್ದೆಲ್ಲವನ್ನು ತಿಳಿಯಪಡಿಸಿದರು.

 ಆಗ ಅವನ ಧಣಿಯು ಅವನನ್ನು ತನ್ನ ಬಳಿಗೆ ಕರೆದು ಅವನಿಗೆ--ಓ ದುಷ್ಟ ಸೇವಕನೇ, ನೀನು ನನ್ನನ್ನು ಬೇಡಿಕೊಂಡದ್ದರಿಂದ ನಾನು ನಿನ್ನ ಸಾಲವನ್ನೆಲಾ ಮನ್ನಿಸಿದೆನು.  ನಾನು ನಿನ್ನ ಮೇಲೆ ಕರುಣೆ ತೋರಿಸಿದಂತೆಯೇ ನೀನು ಸಹ ನಿನ್ನ ಜೊತೇ ಸೇವಕನ ಮೇಲೆ ಕರುಣೆಯನ್ನು ತೋರಿಸಬೇಕಾಗಿತ್ತಲ್ಲವೇ ಎಂದು ಹೇಳಿದನು.
 ಅವನ ಧಣಿಯು ಕೋಪಗೊಂಡು ತನಗೆ ಕೊಡಬೇಕಾದ ಸಾಲವನ್ನೆಲ್ಲಾ ತೀರಿಸುವ ತನಕ ಅವನನ್ನು ಸಂಕಟಪಡಿಸುವವರಿಗೆ ಒಪ್ಪಿಸಿದನು.

 ಅದರಂತೆಯೇ ನಿಮ್ಮಲ್ಲಿ ಪ್ರತಿಯೊಬ್ಬನು ಹೃದಯಪೂರ್ವಕವಾಗಿ ತನ್ನ ಸಹೋದರನ ತಪ್ಪುಗಳನ್ನು ಕ್ಷಮಿಸದೆಹೋದರೆ ಪರಲೋಕದಲ್ಲಿರುವ ನನ್ನ ತಂದೆಯೂ ನಿಮಗೆ ಹಾಗೆಯೇ ಮಾಡುವನು ಅಂದನು.


Thursday, January 7, 2016

Wallpaper - 2 Corinthians 5:17


2 ಕೊರಿಂಥದವರಿಗೆ 5

 1 ಈ ಗುಡಾರವಾಗಿರುವ ಮಣ್ಣಿನ ನಮ್ಮ ಮನೆಯು (ಶರೀರವು) ತೆಗೆದುಹಾಕಲ್ಪ ಟ್ಟರೆ ಕೈಗಳಿಂದ ಮಾಡದಿರುವಂಥಾದ್ದೂ
 2 ಪರಲೋಕ ಗಳಲ್ಲಿ ನಿತ್ಯವಾಗಿರುವಂಥಾದ್ದೂ ಆಗಿರುವ ದೇವರ ಕಟ್ಟಡವು ನಮಗಿದೆಯೆಂದು ನಾವು ಬಲ್ಲೆವು. ಪರಲೋಕದಲ್ಲಿರುವ ನಮ್ಮ ಮನೆಯನ್ನು ನಾವು ಧರಿಸಿಕೊಳ್ಳಬೇಕೆಂದು ಆಸಕ್ತಿಯಿಂದ ಅಪೇಕ್ಷಿಸುವರಾಗಿ ಇದರಲ್ಲಿ ನರಳುತ್ತೇವೆ.
3 ಹೀಗೆ ನಾವು ಧರಿಸಿಕೊಂಡಿ ರುವದಾದರೆ ನಾವು ಬೆತ್ತಲೆಯಾಗಿ ಕಂಡುಬರುವದಿಲ್ಲ.
4 ಯಾಕಂದರೆ ಈ ಗುಡಾರದಲ್ಲಿರುವವರಾದ ನಾವು ಭಾರಹೊತ್ತುಕೊಂಡವರಾಗಿ ನರಳುತ್ತೇವೆ; ಇದು ಕಳಚಿಹೋಗಬೇಕೆಂತಲ್ಲ; ಆದರೆ ಜೀವವು ಮರ್ತ್ಯ ವನ್ನು ನುಂಗುವಂತೆ ಅದನ್ನು ಮೇಲೆ ಧರಿಸಿ ಕೊಳ್ಳಬೇಕೆಂದು ನಾವು ಇಚ್ಚಿಸುತ್ತೇವೆ.
5 ಅದಕ್ಕಾಗಿಯೇ ನಮ್ಮನ್ನು ಸಿದ್ಧಮಾಡಿದ ದೇವರು ತಾನೇ ನಮಗೆ ಆತ್ಮನನ್ನು ಸಂಚಕಾರವಾಗಿ ಅನುಗ್ರಹಿಸಿದ್ದಾನೆ.
6 ಹೀಗಿರುವದರಿಂದ ಶರೀರದ ಮನೆಯಲ್ಲಿರುವ ವರೆಗೂ ನಾವು ಕರ್ತನಿಗೆ ದೂರವಾಗಿದ್ದೇವೆಂದು ಬಲ್ಲವರಾಗಿ ನಾವು ಯಾವಾಗಲೂ ಭರವಸವುಳ್ಳವ ರಾಗಿದ್ದೇವೆ;
7 (ನಾವು ನೋಡುವವರಾಗಿ ನಡೆಯದೆ ನಂಬುವವರಾಗಿಯೇ ನಡೆಯುತ್ತೇವೆ).
8 ನಾವು ದೇಹವನ್ನು ಬಿಟ್ಟು ಕರ್ತನ ಬಳಿಯಲ್ಲಿಯೇ ಇರುವದು ಉತ್ತಮವೆಂದು ಆಶಿಸಿ ಭರವಸವುಳ್ಳವರಾಗಿದ್ದೇವೆ.
 9 ಆದದರಿಂದ ನಾವು (ದೇಹವೆಂಬ ಮನೆಯಲ್ಲಿದ್ದರೂ ಸರಿಯೇ) ಅದನ್ನು ಬಿಟ್ಟಿ ದ್ದರೂ ಸರಿಯೇ, ಆತನನ್ನು ಮೆಚ್ಚಿಸುವವರಾಗಿರಬೇಕೆಂದು ನಾವು ಪ್ರಯಾಸ ಪಡುತ್ತೇವೆ.
10 ಪ್ರತಿಯೊಬ್ಬನು ತನ್ನ ದೇಹದ ಮೂಲಕ ನಡಿಸಿದ ಒಳ್ಳೆಯದಕ್ಕಾಗಲಿ ಕೆಟ್ಟದ್ದಕ್ಕಾಗಲಿ ಸರಿಯಾದದ್ದನ್ನು ಹೊಂದುವದಕ್ಕೋಸ್ಕರ ನಾವೆಲ್ಲರೂ ಕ್ರಿಸ್ತನ ನ್ಯಾಯಾಸನದ ಮುಂದೆ ಕಾಣಿಸಿ ಕೊಳ್ಳಲೇಬೇಕು.
11 ನಾವು ಕರ್ತನ ಭಯವನ್ನು ಅರಿತವರಾದ ಕಾರಣ ಮನುಷ್ಯರನ್ನು ಒಡಂಬಡಿಸುತ್ತೇವೆ; ಆದರೆ ನಾವು ದೇವರಿಗೂ ನಿಮ್ಮ ಮನಸ್ಸಾಕ್ಷಿಗಳಿಗೂ ತೋರಿ ಬಂದಿದ್ದೇವೆಂದು ನಾನು ಭರವಸವುಳ್ಳವನಾಗಿದ್ದೇನೆ.
12 ನಾವು ನಮ್ಮನ್ನು ತಿರಿಗಿ ನಿಮ್ಮ ಮುಂದೆ ಹೊಗಳಿ ಕೊಳ್ಳುವದಿಲ್ಲ; ಆದರೆ ಯಾರು ಹೃದಯದ ವಿಷಯದಲ್ಲಿ ಹೊಗಳಿಕೊಳ್ಳದೆ ತೋರಿಕೆಯ ವಿಷಯದಲ್ಲಿ ಮಾತ್ರ ಹೊಗಳಿಕೊಳ್ಳುತ್ತಾರೋ ಅವರಿಗೆ ಪ್ರತ್ಯುತ್ತರ ಹೇಳು ವದಕ್ಕೆ ನಿಮಗೆ ಆಧಾರವಿರಬೇಕೆಂದು ನಮ್ಮ ವಿಷಯ ದಲ್ಲಿ ಹೆಚ್ಚಳಪಡುವದಕ್ಕೆ ನಿಮಗೆ
13 ನಮಗೆ ಬುದ್ದಿಪರವಶವಾಗಿದ್ದರೆ ಅದು ದೇವರಿಗಾಗಿ ಇರುತ್ತದೆ; ಇಲ್ಲವೆ ನಮಗೆ ಸ್ವಸ್ಥಬುದ್ಧಿ ಇದ್ದರೆ ಅದು ನಿಮ್ಮ ನಿಮಿತ್ತವಾಗಿ ಇರುತ್ತದೆ.
14 ಕ್ರಿಸ್ತನ ಪ್ರೀತಿಯು ನಮ್ಮನ್ನು ಒತ್ತಾಯಮಾಡುತ್ತದೆ; ಹೀಗೆ ಎಲ್ಲರಿಗೋಸ್ಕರ ಒಬ್ಬನು ಸತ್ತದ್ದರಿಂದ ಎಲ್ಲರೂ ಸತ್ತಂತಾಯಿತೆಂದು ನಾವು ಹೀಗೆ ನಿಶ್ಚಯಿಸಿಕೊಳ್ಳುತ್ತೇವೆ.
15 ಜೀವಿಸುವವರು ಇನ್ನು ಮೇಲೆ ತಮಗಾಗಿ ಜೀವಿಸದೆ ತಮಗೋಸ್ಕರ ಸತ್ತು ತಿರಿಗಿ ಎದ್ದು ಬಂದಾತನಿಗಾಗಿ ಜೀವಿಸಬೇಕೆಂತಲೇ ಆತನು ಎಲ್ಲರಿಗೋಸ್ಕರ ಸತ್ತನು.
16 ಹೀಗಿರಲಾಗಿ ಇಂದಿನಿಂದ ನಾವು ಯಾರನ್ನೂ ಶರೀರ ಸಂಬಂಧವಾಗಿ ಅರಿತುಕೊಳ್ಳುವದಿಲ್ಲ; ಹೌದು, ಕ್ರಿಸ್ತನನ್ನು ಕೂಡ ನಾವು ಶರೀರಸಂಬಂಧವಾಗಿ ತಿಳಿದಿದ್ದರೂ ಇನ್ನು ಮುಂದೆ ಆತನನ್ನು ಹಾಗೆ ಎಂದಿಗೂ ತಿಳುಕೊಳ್ಳುವದಿಲ್ಲ,
17 ಹೀಗಿರಲಾಗಿ ಯಾವನಾದರೂ ಕ್ರಿಸ್ತನಲ್ಲಿದ್ದರೆ ಅವನು ನೂತನ ಸೃಷ್ಟಿಯಾಗಿದ್ದಾನೆ. ಹಳೆಯವುಗಳು ಅಳಿದುಹೋದವು; ಇಗೋ, ಎಲ್ಲವೂ ನೂತನವಾದವು.  
18 ಎಲ್ಲವುಗಳು ದೇವರವುಗಳಾಗಿವೆ; ಆತನು ಯೇಸು ಕ್ರಿಸ್ತನ ಮೂಲಕ ನಮ್ಮನ್ನು ತನಗೆ ಸಮಾಧಾನಪಡಿಸಿಕೊಂಡು ಸಮಾಧಾನದ ವಿಷಯವಾದ ಸೇವೆಯನ್ನು ನಮಗೆ ಅನುಗ್ರಹಿಸಿದ್ದಾನೆ.
19 ಅದೇನಂದರೆ, ದೇವರು ಮನುಷ್ಯರ ಅಪರಾಧಗಳನ್ನು ಅವರ ಲೆಕ್ಕಕ್ಕೆ ಹಾಕದೆ ಲೋಕವನ್ನು ಕ್ರಿಸ್ತನಲ್ಲಿ ತನಗೆ ಸಮಾಧಾನಪಡಿಸಿ ಕೊಳ್ಳುತ್ತಿದ್ದನೆಂಬದೇ; ಆ ಸಮಾಧಾನದ ವಾಕ್ಯವನ್ನು ನಮ್ಮ ವಶಕ್ಕೆ ಕೊಟ್ಟಿದ್ದಾನೆ.
20 ದೇವರೇ ನಮ್ಮ ಮೂಲಕ ನಿಮ್ಮನ್ನು ಬೇಡಿ ಕೊಳ್ಳುತ್ತಾನೋ ಎಂಬಂತೆ ನಾವು ಈಗ ಕ್ರಿಸ್ತನ ರಾಯಭಾರಿಗಳಾಗಿದ್ದೇವೆ. ದೇವರೊಂದಿಗೆ ಸಮಾ ಧಾನವಾಗಿರೆಂದು ಕ್ರಿಸ್ತನಿಗೆ ಬದಲಾಗಿ ನಾವು ನಿಮ್ಮನ್ನು ಬೇಡಿಕೊಳ್ಳುತ್ತೇವೆ.
21 ನಾವು ಆತನಲ್ಲಿ ದೇವರ ನೀತಿಯಾಗುವಂತೆ ದೇವರು ಪಾಪವನ್ನರಿಯ ಆತನನ್ನು ನಮಗೋಸ್ಕರ ಪಾಪವಾಗ ಮಾಡಿದನು.

Thursday, December 31, 2015

KANNADA BIBLE ILLUSTRATION - PARABLE OF SOWER




ಆತನು ಪ್ರತಿಯೊಂದು ಪಟ್ಟಣಕ್ಕೂ ಹಳ್ಳಿಗೂ ಎಲ್ಲಾ ಕಡೆಯಲ್ಲಿ ಹೋಗಿ ದೇವರರಾಜ್ಯದ ಸಂತೋಷಸಮಾಚಾರವನ್ನು ಸಾರಿ ತಿಳಿಸುತ್ತಿದ್ದನು




ಆಗ ಪ್ರತಿಯೊಂದು ಪಟ್ಟಣದಿಂದ ಬಹು ಜನರು ಆತನ ಬಳಿಗೆ ಒಟ್ಟಾಗಿ ಸೇರಿ ಬರಲು ಆತನು ಒಂದು ಸಾಮ್ಯದಿಂದ




ಬಿತ್ತುವವನು ಬೀಜವನ್ನು ಬಿತ್ತುವದಕ್ಕಾಗಿ ಹೊರಟು ಹೋದನು. ಅವನು ಬಿತ್ತಿದಾಗ ಕೆಲವು ದಾರಿಯ ಮಗ್ಗುಲಲ್ಲಿ ಬಿದ್ದು ತುಳಿಯಲ್ಪಟ್ಟವು; ಆಕಾಶದ ಪಕ್ಷಿಗಳು ಅವುಗಳನ್ನು ನುಂಗಿಬಿಟ್ಟವು.




ಇದಲ್ಲದೆ ಕೆಲವು ಬಂಡೆಯ ಮೇಲೆ ಬಿದ್ದವು; ಮೊಳೆತ ಕೂಡಲೆ ತ್ಯಾವ ಇಲ್ಲದಿರುವ ಕಾರಣ ಒಣಗಿಹೋದವು.



ಕೆಲವು ಮುಳ್ಳುಗಳ ಮಧ್ಯದಲ್ಲಿ ಬಿದ್ದವು; ಆಗ ಮುಳ್ಳುಗಳು ಅವುಗಳೊಂದಿಗೆ ಬೆಳೆದು ಅವುಗಳನ್ನು ಅಡಗಿಸಿಬಿಟ್ಟವು




ಕೆಲವು ಒಳ್ಳೇ ನೆಲದ ಮೇಲೆ ಬಿದ್ದವು; ಆಗ ಅವು ಬೆಳೆದು ನೂರರಷ್ಟು ಫಲಕೊಟ್ಟವು.




ಇವುಗಳನ್ನು ಆತನು ಹೇಳಿ--ಕೇಳುವದಕ್ಕೆ ಕಿವಿಗಳುಳ್ಳವನು ಕೇಳಲಿ ಎಂದು ಕೂಗಿ ಹೇಳಿದನು.



ಆತನ ಶಿಷ್ಯರು ಆತ ನನ್ನು--ಈ ಸಾಮ್ಯವು ಏನಾಗಿರಬಹುದು ಎಂದು ಕೇಳಿದರು




ಅದಕ್ಕೆ ಆತನು--ದೇವರರಾಜ್ಯದ ಮರ್ಮಗಳನ್ನು ತಿಳುಕೊಳ್ಳುವದಕ್ಕೆ ನಿಮಗೆ ಕೊಡಲ್ಪಟ್ಟಿದೆ.




ಆದರೆ ಉಳಿದವರಿಗೆ ಅವರು ನೋಡಿದರೂ ಕಾಣದಂತೆ ಮತ್ತು ಕೇಳಿದರೂ ಗ್ರಹಿಸದಂತೆ ಸಾಮ್ಯ ಗಳಲ್ಲಿ ಕೊಡಲ್ಪಟ್ಟಿದೆ




ಆ ಸಾಮ್ಯವು ಇದೇ; ಬೀಜವು ದೇವರ ವಾಕ್ಯವೇ ವಾಕ್ಯವನ್ನು ಕೇಳಿದವರು ನಂಬಿ ರಕ್ಷಣೆಹೊಂದಿಕೊಳ್ಳದಂತೆ ಸೈತಾನನು ಬಂದು ಅವರ ಹೃದಯದೊಳಗಿಂದ ಆ ವಾಕ್ಯವನ್ನು ತೆಗೆದು ಬಿಡುವನು. ಇವರೇ ಆ ದಾರಿಯ ಮಗ್ಗುಲಾಗಿ ರುವವರು.



ಬಂಡೆಯ ನೆಲದವರು ಯಾರಂದರೆ, ಅವರು ವಾಕ್ಯವನ್ನು ಕೇಳಿದಾಗ ಸಂತೋಷದಿಂದ ಅಂಗೀಕರಿಸುವರು; ಇವರು ಬೇರಿಲ್ಲದಿರುವದರಿಂದ ಸ್ವಲ್ಪಕಾಲ ನಂಬಿ ಶೋಧನೆ ಬಂದಾಗ ಬಿದ್ದು ಹೋಗುವರು

ಮುಳ್ಳುಗಳ ಮಧ್ಯದಲ್ಲಿ ಬಿದ್ದ ಬೀಜದವರು ಯಾರಂದರೆ ಅವರು ಕೇಳಿದ ಮೇಲೆ ಮುಂದರಿದು ಈ ಜೀವನದ ಚಿಂತೆಗಳಿಂದಲೂ ಐಶ್ವರ್ಯಗಳಿಂದಲೂ ಭೋಗಗಳಿಂದಲೂ ಅಡಗಿಸ ಲ್ಪಟ್ಟು ಪರಿಪೂರ್ಣವಾಗಿ ಫಲಿಸದವರು.




ಆದರೆ ಒಳ್ಳೇ ಭೂಮಿಯವರು ಯಾರಂದರೆ ಯಥಾರ್ಥವಾದ ಒಳ್ಳೇ ಹೃದಯದಿಂದ ವಾಕ್ಯವನ್ನು ಕೇಳಿ ಅದನು ಕೈಕೊಂಡು ತಾಳ್ಮೆಯಿಂದ ಫಲಿಸುವವರೇ.