ಮತ್ತಾಯ 6:9-15
9 ಆದದರಿಂದ ನೀವು ಈ ರೀತಿಯಲ್ಲಿ ಪ್ರಾರ್ಥನೆ ಮಾಡಿರಿ--ಪರಲೋಕದಲ್ಲಿರುವ ನಮ್ಮ ತಂದೆಯೇ, ನಿನ್ನ ನಾಮವು ಪರಿಶುದ್ಧವಾಗಿರಲಿ. ನಿನ್ನ ರಾಜ್ಯವು ಬರಲಿ.
10 ನಿನ್ನ ಚಿತ್ತವು ಪರಲೋಕದಲ್ಲಿ ನೆರವೇರು ವಂತೆ ಭೂಲೋಕದಲ್ಲಿಯೂ ನೆರೆವೇರಲಿ.
11 ನಮ್ಮ ಅನುದಿನದ ರೊಟ್ಟಿಯನ್ನು ಈ ದಿನವು ನಮಗೆ ದಯಪಾಲಿಸು.
12 ನಮ್ಮ ಸಾಲಗಾರರನ್ನು ನಾವು ಕ್ಷಮಿಸುವಂತೆ ನಮ್ಮ ಸಾಲಗಳನ್ನು ನಮಗೆ ಕ್ಷಮಿಸು.
13 ನಮ್ಮನ್ನು ಶೋಧನೆಯೊಳಗೆ ನಡಿಸದೆ ಕೇಡಿನಿಂದ ತಪ್ಪಿಸು. ಯಾಕಂದರೆ ರಾಜ್ಯವೂ ಬಲವೂ ಮಹಿಮೆಯೂ ಎಂದೆಂದಿಗೂ ನಿನ್ನವೇ. ಆಮೆನ್.
14 ಆದದರಿಂದ ನೀವು ಮನುಷ್ಯರ ಅಪರಾಧ ಗಳನ್ನು ಕ್ಷಮಿಸುವದಾದರೆ ಪರಲೋಕದ ನಿಮ್ಮ ತಂದೆಯು ಸಹ ನಿಮ್ಮನ್ನು ಕ್ಷಮಿಸುವನು.
15 ನೀವು ಮನುಷ್ಯರ ಅಪರಾಧಗಳನ್ನು ಕ್ಷಮಿಸದೆ ಹೋದರೆ ನಿಮ್ಮ ತಂದೆಯೂ ನಿಮ್ಮ ಅಪರಾಧಗಳನ್ನು ಕ್ಷಮಿಸು ವದಿಲ್ಲ.
Cross Reference
ಮತ್ತಾಯ 6:9 - (ಲೂಕ 11:2) ಆತನು ಅವರಿಗೆ--ನೀವು ಪ್ರಾರ್ಥನೆ ಮಾಡುವಾಗ--ಪರಲೋಕದಲ್ಲಿರುವ ನಮ್ಮ ತಂದೆ ಯೇ, ನಿನ್ನ ನಾಮವು ಪರಿಶುದ್ಧವಾಗಲಿ, ನಿನ್ನ ರಾಜ್ಯವು ಬರಲಿ, ನಿನ್ನ ಚಿತ್ತವು ಪರಲೋಕದಲ್ಲಿ ನೆರವೇರುವಂತೆ ಭೂಮಿಯಲ್ಲಿಯೂ ನೆರವೇರಲಿ.
ಮತ್ತಾಯ 6:13 - (ಮತ್ತಾಯ 13:19)
ಯಾವನಾದರೂ ರಾಜ್ಯದ ವಾಕ್ಯವನ್ನು ಕೇಳಿ ಗ್ರಹಿಸದೆ ಇರುವಾಗ ಕೆಡುಕನು ಬಂದು ಅವನ ಹೃದಯದಲ್ಲಿ ಬಿತ್ತಿದ್ದನ್ನು ತೆಗೆದು ಬಿಡು ವನು; ದಾರಿಯ ಮಗ್ಗುಲಲ್ಲಿ ಬೀಜವನ್ನು ಅಂಗೀಕರಿ ಸಿದವನು ಇವನೇ.
ಮತ್ತಾಯ 6:14 - (ಮಾರ್ಕ 11:25) ನೀವು ನಿಂತು ಕೊಂಡು ಪ್ರಾರ್ಥಿಸುವಾಗ ಯಾವನಿಗಾದರೂ ವಿರೋ ಧವಾದದ್ದು ನಿಮ್ಮಲ್ಲಿದ್ದರೆ ಕ್ಷಮಿಸಿರಿ; ಆಗ ಪರಲೋಕ ದಲ್ಲಿರುವ ನಿಮ್ಮ ತಂದೆಯು ಸಹ ನಿಮ್ಮ ಅಪರಾಧಗಳನ್ನು ನಿಮಗೆ ಕ್ಷಮಿಸುವನು.
(ಕೊಲೊಸ್ಸೆ 3:13) ಯಾವನಿ ಗಾದರೂ ಒಬ್ಬನಿಗೆ ಇನ್ನೊಬ್ಬನ ಮೇಲೆ ವಿರೋಧವಾಗಿ ವ್ಯಾಜ್ಯವಿದ್ದರೂ ಒಬ್ಬರಿಗೊಬ್ಬರು ತಾಳಿಕೊಂಡು ಕ್ರಿಸ್ತನು ನಿಮ್ಮನ್ನು ಕ್ಷಮಿಸಿದಂತೆಯೇ ನೀವು ಒಬ್ಬರಿಗೊಬ್ಬರು ಕ್ಷಮಿಸಿರಿ.
ಮತ್ತಾಯ 6:15 - (ಮಾತ್ತಾಯ 18:35) ಅದರಂತೆಯೇ ನಿಮ್ಮಲ್ಲಿ ಪ್ರತಿಯೊ ಬ್ಬನು ಹೃದಯಪೂರ್ವಕವಾಗಿ ತನ್ನ ಸಹೋದರನ ತಪ್ಪುಗಳನ್ನು ಕ್ಷಮಿಸದೆಹೋದರೆ ಪರಲೋಕದಲ್ಲಿರುವ ನನ್ನ ತಂದೆಯೂ ನಿಮಗೆ ಹಾಗೆಯೇ ಮಾಡುವನು ಅಂದನು.
(ಯಾಕೋಬನು 2:13) ಕರುಣೆ ತೋರಿಸದೆ ಇರುವವನಿಗೆ ನ್ಯಾಯತೀರ್ಪಿನಲ್ಲಿ ಕರುಣೆಯು ತೋರಿಸಲ್ಪಡುವದಿಲ್ಲ. ಕರುಣೆಯು ನ್ಯಾಯತೀರ್ಪಿಗಿಂತ ಮೇಲಾಗಿ ಹಿಗ್ಗುತ್ತದೆ.
No comments:
Post a Comment